ಮಧುಮೇಹ ಅಂದರೆ ನೀವು ನಿಮ್ಮ ರಕ್ತದಲ್ಲಿ ಅತೀ ಹೆಚ್ಚು ಸಕ್ಕರೆಯನ್ನು ಹೊಂದಿದ್ದೀರಿ ಎಂದು ಅರ್ಥ. ಇನ್ಸುಲಿನ್ ಎಂದು ಕರೆಯಲ್ಪಡುವ ಒಂದು ರಾಸಾಯನಿಕ, ಅಥವಾ ಹಾರ್ಮೋನಿನ ಉತ್ಪಾದನೆಯನ್ನು ನಿಮ್ಮ ದೇಹವು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದೇ ಇದ್ದಾಗ ರಕ್ತದಲ್ಲಿ ಅಧಿಕ ಸಕ್ಕರೆಯ ಸಮಸ್ಯೆಯು ಉಂಟಾಗುತ್ತದೆ. ನಿಮ್ಮ ದೇಹವು ನೀವು ಸೇವಿಸುವ ಹೆಚ್ಚಿನ ಆಹಾರವನ್ನು ಗ್ಲೂಕೋಸ್ ಎಂದು ಕರೆಯಲ್ಪಡುವ ಒಂದು ವಿಧದ ಸಕ್ಕರೆಯನ್ನಾಗಿ ಮಾರ್ಪಡಿಸುತ್ತದೆ. ಈ ಸಕ್ಕರೆಯು ನಿಮ್ಮ ರಕ್ತದಲ್ಲಿ ಚಲಿಸಿ ನಿಮ್ಮ ದೇಹದಲ್ಲಿರುವ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ಸಕ್ಕರೆ ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ತಲುಪಲು ಇನ್ಸುಲಿನ್ ನೆರವಾಗುತ್ತದೆ. ಇನ್ಸುಲಿನ್ ಇಲ್ಲದೇ ಇದ್ದರೆ, ನಿಮ್ಮ ಜೀವಕೋಶಗಳಿಗೆ ನಿಮ್ಮನ್ನು ಸದಾ ಚೈತನ್ಯದಿಂದಿಡಲು ಬೇಕಾಗುವ ಸಕ್ಕರೆಯನ್ನು ಪಡೆಯಲು ಆಗುವುದಿಲ್ಲ. ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ದೇಹದ ಜೀವಕೋಶಗಳಿಗೆ ಸಾಗಿಸುವ ಮೂಲಕ, ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹಜ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. (ಅತೀ ಹೆಚ್ಚೂ ಅಲ್ಲ; ಅತೀ ಕಡಿಮೆಯೂ ಅಲ್ಲ) ರಕ್ತದಲ್ಲಿರುವ ಅಧಿಕ ಸಕ್ಕರೆಯ ಪ್ರಮಾಣವನ್ನು ತಗ್ಗಿಸಲು ನಿಮ್ಮಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲ ಎಂದಾದರೆ ನೀವು ಮಧುಮೇಹಿ ಎಂದರ್ಥ. ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶವು ಗಂಭೀರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು. ಮಧುಮೇಹಕ್ಕೆ ಚಿಕಿತ್ಸೆ ಮಾಡಬಹುದು, ಮತ್ತು ಮಾಡಲೇಬೇಕು.
ನಿಮ್ಮ ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದೇ ಇದ್ದಾಗ ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುತ್ತಿಲ್ಲ, ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾಗ. ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ಚಲಿಸುವಂತೆ ಮಾಡಲು ನಿಮ್ಮಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದೇ ಹೋದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅಧಿಕ ಮಟ್ಟದಲ್ಲಿರುತ್ತದೆ.
1ನೇ ವಿಧದ ಮಧುಮೇಹದಲ್ಲಿ, ದೇಹಕ್ಕೆ ಇಸುಲಿನ್ ಅನ್ನು ಉತ್ಪಾದಿಸಲು ಆಗುತ್ತಿಲ್ಲ. 1ನೇ ವಿಧದ ಮಧುಮೇಹವು ವಯಸ್ಸಾದವರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ತಾರುಣ್ಯದ ಹೊಸ್ತಿಲಲ್ಲಿ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ. 1ನೇ ವಿಧದ ಮಧುಮೇಹವನ್ನು ಹೊಂದಿರುವ ವ್ಯಕ್ತಿಗಳು ತಮ್ಮ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡಲು ಇನ್ಸುಲಿನ್ ಅನ್ನು ಚುಚ್ಚುಮದ್ದಿನ ಮೂಲಕ ಹಾಕಿಸಿಕೊಳ್ಳಲೇಬೇಕು.
ಚೈತನ್ಯಕ್ಕಾಗಿ ಜೀವಕೋಶಗಳಲ್ಲಿ ಉಪಯೋಗಿಸಲ್ಪಡುವ ಗ್ಲೂಕೋಸ್ ಅನ್ನು(ನೀವು ಸೇವಿಸುವ ಆಹಾರದಿಂದ ಉತ್ಪಾದಿಸಲ್ಪಡುತ್ತದೆ) ರಕ್ತದಿಂದ ದೇಹದ ಜೀವಕೋಶಗಳಿಗೆ ರವಾನಿಸಲು ಇನ್ಸುಲಿನ್ ಒಂದು ಅವಶ್ಯಕವಾದ ಹಾರ್ಮೋನ್ ಆಗಿದೆ. ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಹೋದಾಗ, ಗ್ಲೂಕೋಸ್ ರಕ್ತದಲ್ಲಿ ಶೇಖರಗೊಂಡು, ಈ ಕೆಳಗಿನ ಸಮಸ್ಯೆಗಳನ್ನೂ ಒಳಗೊಂಡು ಜನರನ್ನು ಗಂಭೀರವಾದ ಆರೋಗ್ಯದ ಸಮಸ್ಯೆಗಳ ಅಪಾಯಕ್ಕೀಡುಮಾಡುತ್ತದೆ-
ಅದು ರಕ್ತದಲ್ಲಿನ ಗ್ಲೂಕೋಸನ್ನು ನಿಯಂತ್ರಿಸಲು ಮೇದೋಜ್ಜೀರಕ ಗ್ರಂಥಿಗಳು ಉತ್ಪಾದಿಸುವ ಹಾರ್ಮೋನ್ ಆಗಿದೆ. ಇನ್ಸುಲಿನ್ ಇಲ್ಲದಿದ್ದರೆ ನಮ್ಮ ಶರೀರದ ಕೋಶಗಳು ಗ್ಲೂಕೋಸನ್ನು ಒಂದು ಶಕ್ತಿಯ ಮೂಲವಾಗಿ ಬಳಸಲು ಆಗುವುದಿಲ್ಲ. ನಿಮಗೆ ಮಧುಮೇಹವಿದ್ದಲ್ಲಿ, ನಿಮ್ಮ ದೇಹವು ಇನ್ಸುಲಿನ್ನ್ನು ತಯಾರಿಸುವುದಿಲ್ಲ ಅಥವಾ ನೀವು ತಯಾರಿಸುವ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ ನಿಮಗೆ ಹೊರಗಿನ ಇನ್ಸುಲಿನ್ನ ಅಗತ್ಯವಿರುತ್ತದೆ. ಒಂದು ಇನ್ಸುಲಿನ್ ಪೆನ್, ಒಂದು ಸಿರಿಂಜ್, ಅಥವಾ ಇನ್ಸುಲಿನ್ ಪಂಪ್ನ ಮೂಲಕ ಚುಚ್ಚಿಕೊಂಡು ನಿಮಗೆ ಬೇಕಾದ ಇನ್ಸುಲಿನ್ನ್ನು ಪಡೆದುಕೊಳ್ಳಬಹುದು. ಇನ್ಸುಲಿನ್ ತೆಗೆದುಕೊಳ್ಳುವುದರಿಂದ: ನಿಮಗೆ ನಿಮ್ಮ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಮಗೆ ಶಕ್ತಿಯನ್ನು ಕೊಡುತ್ತದೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ
ಬಸಲ್ ಇನ್ಸುಲಿನ್ ಎಂದು ಕರೆಯಲ್ಪಡುವ ಇನ್ಸುಲಿನ್ ಉಪವಾಸದ ಸ್ಥಿತಿಯಲ್ಲಿ ಸ್ರವಿಸುತ್ತದೆ. ಆಹಾರದ ಸೇವನೆಯ ನಂತರ ರಕ್ತದ ಗ್ಲೂಕೋಸಿನ ಅಂಶದಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿ ಇನ್ಸುಲಿನ್ ಸ್ರವಿಸುವಿಕೆಯೂ ಹೆಚ್ಚಾಗುತ್ತದೆ. ಮಧುಮೇಹದಲ್ಲಿ ಈ ಪ್ರಕ್ರಿಯೆಯು ಪರಿಣಾಮಕ್ಕೊಳಪಡುತ್ತದೆ ಇದಕ್ಕಾಗಿ ಹೊರಗಿನಿಂದ ಇನ್ಸುಲಿನ್ನ್ನು ಇಂಜೆಕ್ಟ್ ಮಾಡಬೇಕಾಗುತ್ತದೆ.
ನಿಮ್ಮ ದೇಹದ ದಪ್ಪನೆಯ ಭಾಗದಲ್ಲಿ ಚರ್ಮದ ಸ್ವಲ್ಪ ಒಳಗೆ ಚುಚ್ಚಿಕೊಂಡಾಗ ಇನ್ಸುಲಿನ್ ಉತ್ತಮವಾಗಿ ಕೆಲಸ ಮಾಡುತ್ತದೆ. ನೀವು ದವಾಖಾನೆ (ಕ್ಲಿನಿಕ್) ಯನ್ನು ಬಿಡುವುದರ ಮೊದಲು, ನೀವು ಈ ಕೆಳಗಿನವುಗಳನ್ನು ಹೇಗೆ ಮಾಡಬೇಕೆಂದು ತಿಳಿದುಕೊಂಡಿದ್ದೀರೆಂದು ಖಾತರಿಪಡಿಸಿಕೊಳ್ಳಿ: ಇನ್ಸುಲಿನ್ನ್ನು ಸಿದ್ಧಪಡಿಸುವುದು ಇನ್ಸುಲಿನ್ನ್ನು ಚುಚ್ಚಿಕೊಳ್ಳುವುದು ಚುಚ್ಚಿಕೊಂಡ ಸ್ಥಳವನ್ನು ತಿರುಗಿಸುವುದು
ಇನ್ಸುಲಿನ್ನ್ನು ನಿಮ್ಮ ದೇಹದೊಳಕ್ಕೆ ರವಾನಿಸುವ ಹಲವಾರು ಸಾಧನಗಳು ಲಭ್ಯವಿವೆ; ಸಿರಿಂಜ್, ಇನ್ಸುಲಿನ್ ಪೆನ್, ಇನ್ಸುಲಿನ್ ಪಂಪ್, ಮತ್ತು ಐ-ಪೋರ್ಟ್ಗಳು ಇನ್ಸುಲಿನ್ನ್ನು ರವಾನಿಸಲು ಇರುವ ಹಲವಾರು ಆಯ್ಕೆಗಳು.
ಇನ್ಸುಲಿನ್ ಸಿರಿಂಜ್ಗಳು ಸಾಮಾನ್ಯವಾದವುಗಳಿಗಿಂತ ಭಿನ್ನವಾಗಿರುತ್ತವೆ. ಅವುಗಳು ತೆಳ್ಳಗಿದ್ದು, ಸರಿಸುಮಾರು ನೋವೇ ಇಲ್ಲದ ಸೂಜಿಯೊಂದಿಗೆ ಮತ್ತು ತೆಗೆಯಬಲ್ಲ ಸೂಜಿಯ (ನೀಡಲ್) ಗಾರ್ಡ್ನೊಂದಿಗೆ ಬರುತ್ತವೆ. ಸರಿಯಾದ ಪ್ರಮಾಣದ ಇನ್ಸುಲಿನ್ನ್ನು ಹೊರಸೆಳೆಯಲು ಅನುವಾಗುವಂತೆ ಸೂಜಿಯ (ಸಿರಿಂಜ್ನ) ಹೊರಭಾಗವು ಗೆರೆಗಳಿಂದ ಗುರುತಿಸಲ್ಪಟ್ಟಿರುತ್ತವೆ.
ಇದು ಇನ್ಸುಲಿನ್ ಕಾರ್ಟ್ರಿಜ್ (ಸಂಯೋಜಿತ ಅಥವಾ ಪ್ರತ್ಯೇಕವಾಗಿ ಖರೀದಿಸಿದ) ನ್ನು ಮತ್ತು ಪ್ರಮಾಣವನ್ನು ಅಳೆಯಲು ಒಂದು ಡಯಲ್ನ್ನು ಒಳಗೊಂಡಿರುತ್ತದೆ, ಮತ್ತು ಔಷಧಿಯನ್ನು ರವಾನಿಸಲು ಇದನ್ನು ಎಸೆಯಬಹುದಾದ ಪೆನ್ ಸೂಜಿಯೊಂದಿಗೆ ಬಳಸಬಹುದು. ಇನ್ಸುಲಿನ್ ಸಿರಿಂಜ್ಗಳಿಗೂ ಮೇಲಾಗಿ ಇನ್ಸುಲಿನ್ ಪೆನ್ಗಳು ಹಲವಾರು ಮುಖ್ಯ ಲಾಭಗಳನ್ನು ಒದಗಿಸುತ್ತವೆ: ಸುಲಭ ನಿರ್ವಹಣೆ ನಿಖರತೆ
ಕೈಗಳನ್ನು ಬೆಚ್ಚಗಿನ ಮತ್ತು ಸಾಬೂನಿನಿಂದ ಕೂಡಿದ ನೀರಿನಿಂದ ತೊಳೆದುಕೊಳ್ಳಿ. ನೀವು ಕ್ಲೌಡಿ ಇನ್ಸುಲಿನ್ ಅನ್ನು(ಅಂದರೆ ಸಾಮಾನ್ಯ ಮತ್ತು ಎನ್ಪಿಹೆಚ್ ಅಥವಾ ಅಲ್ಟ್ರಾಲೆಂಟ್ ಇನ್ಸುಲಿನ್ಗಳ ಮಿಶ್ರಣ) ಬಳಸುವುದಾದರೆ, ಬಾಟಲಿಯನ್ನು ಹಸ್ತಗಳ ನಡುವೆ ಉರುಳಿಸಿ (ಅಲ್ಲಾಡಿಸಬೇಡಿ) ಇನ್ಸುಲಿನ್ ಬಾಟಲಿಯ ರಬ್ಬರ್ ಬಿರಡೆಯನ್ನು(ಸ್ಟಾಪರ್) ಮದ್ಯಸಾರ (ಆಲ್ಕೋಹಾಲ್)ದಿಂದ ಸ್ವಚ್ಛಗೊಳಿಸಿ. ಸಿರಿಂಗ್ ಅನ್ನು ನೀವು ತೆಗೆದುಕೊಳ್ಳುವ ಇನ್ಸುಲಿನ್ನಿನ ಪ್ರಮಾಣದವರೆಗೆ ಗಾಳಿಯಿಂದ ತುಂಬಿಸಿ. ಸೂಜಿಯನ್ನು ಬಾಟಲಿಯ ಬಿರಡೆಗೆ ಚುಚ್ಚಿ ಮತ್ತು ಗಾಳಿಯನ್ನು ಬಾಟಲಿಗೆ ತಳ್ಳಿರಿ. ಈಗ ಸಿರಿಂಜ್ ಮತ್ತು ತಲೆಕೆಳಗಾಗಿ ಹಿಡಿಯಿರಿ ಮತ್ತು ನಿಮ್ಮ ಇನ್ಸುಲಿನ್ ಪ್ರಮಾಣವನ್ನು(ಡೋಸ್) ತುಂಬಿಕೊಳ್ಳಿ ಸೂಜಿಯನ್ನು ಚರ್ಮದ ಒಳಕ್ಕೆ ತೂರಿಸಿ. ಇನ್ಸುಲಿನ್ ಅನ್ನು ಒಳ ಸೇರಿಸಲು ಸಿರಿಂಜಿನ ತುದಿಯಲ್ಲಿರುವ ಪ್ಲಂಜರ್ ಅನ್ನು ಒತ್ತಿರಿ.
ಹೊಸ ಪೆನ್ ಸೂಜಿಯ ತಿರುಪನ್ನು ತಿರುವಿರಿ ಅಥವಾ ಕ್ಲಿಕ್ ಮಾಡಿ. ಅಗತ್ವಿದ್ದಲ್ಲಿ, ಸೂಜಿಯಿಂದ ಗಾಳಿಯನ್ನು ಹೊರಹಾಕಲು ಪೆನ್ನನ್ನು ತಿರುವಿರಿ. ಪೆನ್ನಿನ ತುದಿಯಲ್ಲಿರುವ ಬಿರಡೆಯನ್ನು(ಅಥವಾ "ಡಯಲ್" ಅನ್ನು) ನಿಮಗೆ ಬೇಕಾದ ಪ್ರಮಾಣದ ಸಂಖ್ಯೆಯವರೆಗೆ ತಿರುಗಿಸಿ. ಸೂಜಿಯನ್ನು ಚರ್ಮಕ್ಕೆ ಚುಚ್ಚಿಕೊಲ್ಳಿ. ಇನ್ಸುಲಿನ್ ಅನ್ನು ಒಳಸೇರಿಸಲು ಪೆನ್ನಿನ ತುದಿಯಲ್ಲಿರುವ ಗುಂಡಿಯನ್ನು ಅದುಮಿರಿ. ಡೋಸ್ ಅನ್ನು ಅವಲಂಬಿಸಿ ಐದು ಅಥವಾ ಹತ್ತರವರೆಗೆ ಲೆಕ್ಕ ಹಾಕಿ. ಉಪಯೋಗಿಸಿದ ಸೂಜಿಯನ್ನು ಪೆನ್ನಿನಿಂದ ತೆಗೆದು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ.
ಚಿಕ್ಕ ಸೂಜಿಗಳಾದರೆ ಚುಚ್ಚುವುದರಲ್ಲಿ ಆಗುವ ಅಹಿತಕರ ಅನುಭವ ಕಡಿಮೆ. ಆದರೆ, ಇನ್ಸುಲಿನ್ ಎಷ್ಟು ಬೇಗ ಪರಿಣಾಮ ಬೀರುತ್ತದೆ ಎಂಬುದು ಸೂಜಿಯನ್ನು ಎಷ್ಟು ಆಳಕ್ಕೆ ಚುಚ್ಚಿಸಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿದೆ. ಸಿರಿಂಜಿನ ಗಾತ್ರವು(ಉದಾಹರಣೆಗೆ., 1 ಸಿಸಿ, 1/2 ಸಿಸಿ, 3/10 ಸಿಸಿ) ಇನ್ಸುಲಿನ್ ಪ್ರಮಾಣ(ಡೋಸ್)ಕ್ಕೆ ಹೊಂದಿಕೆಯಾಗುವಂತೆ ನೋಡಿಕೊಳ್ಳಿ. ಸಿರಿಂಜ್/ಪೆನ್ನಿನ ಸೂಜಿಯನ್ನು ಮರು-ಬಳಕೆ ಮಾಡಬೇಡಿ. ಸಿರಿಂಜನ್ನು ಹಂಚಿಕೊಳ್ಳಬೇಡಿ. ಬಳಸಿದ ಸಿರಿಂಜ್ಗಳು/ಪೆನ್ ಸೂಜಿಯನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಿ.
ಇನ್ಸುಲಿನ್ನ್ನು ಚರ್ಮದ ಕೆಳಗೆ ದೇಹದ ಕೊಬ್ಬಿನ ಭಾಗಗಳಿಗೆ ಚುಚ್ಚಿಕೊಂಡಲ್ಲಿ ಇನ್ಸುಲಿನ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
ಮೇಲ್ತೋಳಿನ ಹಿಂಭಾಗ ಹೊಟ್ಟೆ (ಹೊಕ್ಕುಳಿನ ಸುತ್ತ) ತೊಡೆಗಳ ಮುಂಭಾಗ ಮತ್ತು ಪಾರ್ಶ್ವಗಳು ಸೊಂಟದ ಮೇಲೆ ಹಿಂಭಾಗ ಕೆಳಭಾಗಗಳು (ಅಂಡುಗಳು) ಮೊದಲು ಇಂಜೆಕ್ಷನ್ ತೆಗೆದುಕೊಂಡ ಜಾಗದಿಂದ 1 ಇಂಚು ದೂರವಿಡಿ. ಹೊಕ್ಕುಳು ಮತ್ತು ಯಾವುದೇ ಗಾಯವಿರುವ ಜಾಗದಿಂದ 2 ಇಂಚುಗಳ ದೂರವಿಡಿ. ತರಚಿದ, ಮೃದುವಾದ, ಉಬ್ಬಿಕೊಂಡ ಅಥವಾ ಗಟ್ಟಿಯಿರುವ ಜಾಗಗಳನ್ನು ಉಪಯೋಗಿಸಬೇಡಿ.
ಇಂಜೆಕ್ಷನ್ ಚುಚ್ಚಿಕೊಳ್ಳುವ ಜಾಗವನ್ನು ತಿರುಗಿಸಿಕೊಳ್ಳುತ್ತಿರುವುದು ಲಿಪೋಡಿಸ್ಟ್ರೋಫಿಯ ಅಪಾಯಗಳನ್ನು, ಒಂದೇ ಜಾಗದಲ್ಲಿ ಮತ್ತೆ ಮತ್ತೆ ಚುಚ್ಚಿಕೊಳ್ಳುವುದರಿಂದ ಚರ್ಮದ ಕೆಳಗೆ ಉಂಟಾಗುವಂತಹ ಕೊಬ್ಬಿನ ಗಂಟುಗಳು ಉಂಟಾಗಬಹುದಾದ ಅಪಾಯವನ್ನು ತಗ್ಗಿಸಬಹುದು. ಜಾಗಗಳನ್ನು ಸರಿಯಾದ ರೀತಿಯಲ್ಲಿ ತಿರುಗಿಸಲು ಇರುವ ಎರಡು ನಿಯಮಗಳು ಪ್ರತಿದಿನದಲ್ಲೂ ಒಂದೇ ಅವಧಿಯಲ್ಲಿ ಒಂದೇ ಸ್ಥಳವನ್ನು ಬಳಸಿಕೊಳ್ಳುವುದು ಚುಚ್ಚಿಕೊಂಡಿರುವ ಜಾಗದ ಒಳಗೇ ತಿರುಗಿಸುವುದು
ಹೆಚ್ಚಿನ ಜನರು ಚರ್ಮವನ್ನು ಮೇಲಕ್ಕೆ ಮಡಚಿಕೊಂಡು ಆ ಜಾಗಕ್ಕೆ ಇಂಜೆಕ್ಷನ್ ಸೂಜಿಯನ್ನು 90° ಕೋನದಲ್ಲಿ ಚುಚ್ಚಿಕೊಳ್ಳುತ್ತಾರೆ. ಚರ್ಮವನ್ನು ಸರಿಯಾದ ರೀತಿಯಲ್ಲಿ ಜಿಗುಟಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ: ನಿಮ್ಮ ಹೆಬ್ಬೆರಳು ಮತ್ತು ಎರಡು ಬೆರಳುಗಳ ನಡುವೆ ಚರ್ಮವನ್ನು ಹಿಡಿದುಕೊಂಡು ಕೆಲವು ಇಂಚುಗಳನ್ನು ಅದುಮಿ ಚರ್ಮವನ್ನು ಮೇಲಕ್ಕೆ ಎಳೆದು ಕೆಳಭಾಗದ ಸ್ನಾಯುಗಳಿಂದ ಮೇಲಕ್ಕೆ ತನ್ನಿ. (ಒಂದು ವೇಳೆ ನೀವು 4 ಅಥವಾ 5 ಮಿಮಿ ಯ ಮಿನಿ ಪೆನ್ ಸೂಜಿಯನ್ನು ಬಳಸುವುದಾದಲ್ಲಿ) ಸೂಜಿಯನ್ನು ಒಳ ಸೇರಿಸಿ. ಸೂಜಿಯು ಸ್ನಾಯುಗಳಿಗೆ ತಾಗದ ಹಾಗೆ ಚಿವುಟಿದ ಭಾಗವನ್ನು ಹಾಗೆಯೇ ಹಿಡಿದುಕೊಳ್ಳಿ. ಇನ್ಸುಲಿನ್ನ್ನು ಒಳಸೇರಿಸಲು ಪ್ಲಂಜರ್ನ್ನು (ಅಥವಾ ನೀವು ಪೆನ್ನ್ನು ಬಳಸುತ್ತಿದ್ದಲ್ಲಿ ಬಟನ್ನ್ನು) ತಳ್ಳಿರಿ. ಚರ್ಮದ ಮಡಕೆಯ ಮೇಲಿನ ಹಿಡಿತವನ್ನು ಬಿಡಿಸಿ. ಚರ್ಮದಿಂದ ಸೂಜಿಯನ್ನು ಹೊರತೆಗೆಯಿರಿ.