ಮಧುಮೇಹ ಅಂದರೆ ನೀವು ನಿಮ್ಮ ರಕ್ತದಲ್ಲಿ ಅತೀ ಹೆಚ್ಚು ಸಕ್ಕರೆಯನ್ನು ಹೊಂದಿದ್ದೀರಿ ಎಂದು ಅರ್ಥ. ಇನ್ಸುಲಿನ್ ಎಂದು ಕರೆಯಲ್ಪಡುವ ಒಂದು ರಾಸಾಯನಿಕ, ಅಥವಾ ಹಾರ್ಮೋನಿನ ಉತ್ಪಾದನೆಯನ್ನು ನಿಮ್ಮ ದೇಹವು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದೇ ಇದ್ದಾಗ ರಕ್ತದಲ್ಲಿ ಅಧಿಕ ಸಕ್ಕರೆಯ ಸಮಸ್ಯೆಯು ಉಂಟಾಗುತ್ತದೆ.
ನಿಮ್ಮ ದೇಹವು ನೀವು ಸೇವಿಸುವ ಹೆಚ್ಚಿನ ಆಹಾರವನ್ನು ಗ್ಲೂಕೋಸ್ ಎಂದು ಕರೆಯಲ್ಪಡುವ ಒಂದು ವಿಧದ ಸಕ್ಕರೆಯನ್ನಾಗಿ ಮಾರ್ಪಡಿಸುತ್ತದೆ.
ಈ ಸಕ್ಕರೆಯು ನಿಮ್ಮ ರಕ್ತದಲ್ಲಿ ಚಲಿಸಿ ನಿಮ್ಮ ದೇಹದಲ್ಲಿರುವ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ನಿಮಗೆ ಶಕ್ತಿಯನ್ನು ಕೊಡಲು ನಿಮ್ಮ ದೇಹದ ಜೀವಕೋಶಗಳಿಗೆ ಸಕ್ಕರೆಯ ಅವಶ್ಯಕತೆಯಿದೆ.
ಸಕ್ಕರೆ ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ತಲುಪಲು ಇನ್ಸುಲಿನ್ ನೆರವಾಗುತ್ತದೆ. ಇನ್ಸುಲಿನ್ ಇಲ್ಲದೇ ಇದ್ದರೆ, ನಿಮ್ಮ ಜೀವಕೋಶಗಳಿಗೆ ನಿಮ್ಮನ್ನು ಸದಾ ಚೈತನ್ಯದಿಂದಿಡಲು ಬೇಕಾಗುವ ಸಕ್ಕರೆಯನ್ನು ಪಡೆಯಲು ಆಗುವುದಿಲ್ಲ.
ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ದೇಹದ ಜೀವಕೋಶಗಳಿಗೆ ಸಾಗಿಸುವ ಮೂಲಕ, ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹಜ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. (ಅತೀ ಹೆಚ್ಚೂ ಅಲ್ಲ; ಅತೀ ಕಡಿಮೆಯೂ ಅಲ್ಲ)
ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ದೇಹದ ಜೀವಕೋಶಗಳಿಗೆ ಸಾಗಿಸುವ ಮೂಲಕ, ಇನ್ಸುಲಿನ್ ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹಜ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. (ಅತೀ ಹೆಚ್ಚೂ ಅಲ್ಲ; ಅತೀ ಕಡಿಮೆಯೂ ಅಲ್ಲ)
ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶವು ಗಂಭೀರವಾದ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಧುಮೇಹಕ್ಕೆ ಚಿಕಿತ್ಸೆ ಮಾಡಬಹುದು, ಮತ್ತು ಮಾಡಲೇಬೇಕು.
ನಿಮ್ಮ ದೇಹವು ಇನ್ಸುಲಿನ್ ಅನ್ನು ಉತ್ಪಾದಿಸದೇ ಇದ್ದಾಗ
ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುತ್ತಿಲ್ಲ, ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಾಗ.
ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ಚಲಿಸುವಂತೆ ಮಾಡಲು ನಿಮ್ಮಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದೇ ಹೋದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಅಧಿಕ ಮಟ್ಟದಲ್ಲಿರುತ್ತದೆ.
2ನೇ ವಿಧದ ಮಧುಮೇಹದಲ್ಲಿ, ದೇಹವು ಇನ್ಸುಲಿನ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸಬಹುದು, ಆದರೆ ಅದು ಸಾಕಾಗುವುದಿಲ್ಲ.
ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
2ನೇ ವಿಧದ ಮಧುಮೇಹವು ಹೆಚ್ಚಾಗಿ ವಯಸ್ಕರಲ್ಲಿ ಪ್ರಾರಂಭವಾಗುತ್ತದೆ, ಆದರೆ ಇದು ಮಕ್ಕಳಲ್ಲೂ ಕೂಡಾ ಆರಂಭವಾಗಬಹುದು.
ಅಧಿಕ ತೂಕವುಳ್ಳ ವ್ಯಕ್ತಿಗಳಲ್ಲಿ ಅಥವಾ ಕುಟುಂಬದಲ್ಲಿ ಇದನ್ನು ಯಾರಾದರೊಬ್ಬರು ಹೊಂದಿದ್ದರೆ ಇದು ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ.
2ನೇ ವಿಧದ ಮಧುಮೇಹ ಬರಲು ಹಲವಾರು ಕಾರಣಗಳಿವೆ ಮತ್ತು ಅವುಗಳು ಇವನ್ನು ಒಳಗೊಂಡಿದೆ:
ನೀವು ತಂಬಾಕು ಸೇವನೆ ಅಥವಾ ಮದ್ಯಪಾನ ಮಾಡುತ್ತಿದ್ದಲ್ಲಿ
ನೀವು ಮಧುಮೇಹವನ್ನು ಹೊಂದಿದ್ದರೆ, ನಿಮ್ಮ ರಕ್ತದಲ್ಲಿ ಅಧಿಕ ಸಕ್ಕರೆಯು(ಗ್ಲೂಕೋಸ್) ಶೇಖರವಾಗುತ್ತದೆ.
ನಿಮ್ಮ ಮೂತ್ರಪಿಂಡಗಳು ಇದನ್ನು ಸೋಸಲು ಮತ್ತು ಅಧಿಕ ಸಕ್ಕರೆಯ ಅಂಶವನ್ನು ಹೀರಿಕೊಳ್ಳಲು ಹೆಚ್ಚು ಅವಧಿಗೆ ಕೆಲಸ ಮಾಡಬೇಕಾಗುತ್ತದೆ, ಹಾಗೂ ಇದು ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡಲು ಕಾರಣವಾಗುತ್ತದೆ.
ಅಗಾಗ್ಗೆ ಮೂತ್ರವಿಸರ್ಜನೆ ಮಾಡುವ ಮೂಲಕ ನಿಮಗೆ ಸಕ್ಕರೆಯ ನಷ್ಟವಾದಾಗ, ನೀವು ಕ್ಯಾಲೋರಿಗಳನ್ನು ಕೂಡಾ ಕಳೆದುಕೊಳ್ಳೂತ್ತೀರಿ.
ಇದೇ ಸಮಯದಲ್ಲಿ, ಮಧುಮೇಹವು ಸಕ್ಕರೆಯನ್ನು ನಿಮ್ಮ ರಕ್ತದಿಂದ ನಿಮ್ಮ ಜೀವಕೋಶಗಳಿಗೆ ತಲುಪುವುದನ್ನು ತಡೆಯಬಹುದು-ಇದು ನಿಮಗೆ ಯಾವಾಗಲೂ ಹಸಿವಿರುವಂತೆ ಭಾಸವಾಗುವಂತೆ ಕಾರಣವಾಗಬಹುದು.
ಇವೆರಡರ ಒಟ್ಟು ಪರಿಣಾಮ ತ್ವರಿತವಾದ ತೂಕದ ಕಳೆದುಕೊಳ್ಳುವಿಕೆ.
ಹೆಚ್ಚಿದ ನೀರಡಿಕೆ( ಪೋಲಿಡಿಪ್ಸಿಯ ಮಧುಮೇಹದ ಒಂದು ಅತ್ಯುತ್ತಮ ಚಿಹ್ನೆ)
ನಿಮಗೆ ಮಧುಮೇಹ ಇದ್ದಾಗ ನಿಮ್ಮ ರಕ್ತದಲ್ಲಿ ಸಕ್ಕರೆಯು (ಗ್ಲೂಕೋಸ್)ಹೆಚ್ಚಿನ ಪ್ರಮಾಣದಲ್ಲಿ ಶೇಖರಗೊಳ್ಳುತ್ತದೆ.
ನಿಮ್ಮ ಮೂತ್ರಪಿಂಡಗಳು ಸಕ್ಕರೆಯನ್ನು ಸೋಸಲು ಮತ್ತು ಹೀರಿಕೊಳ್ಳಲು ಹೆಚ್ಚು ಕಾರ್ಯ ನಿರ್ವಹಿಸಬೇಕಾಗುತ್ತದೆ.
ಮೂತ್ರಪಿಂಡಗಳಿಗೆ ಇದು ಸಾಧ್ಯವಾಗದೇ ಹೋದಲ್ಲಿ ಹೆಚ್ಚಿರುವ ಸಕ್ಕರೆಯ ಅಂಶವು ನಿಮ್ಮ ಮೂತ್ರದಿಂದ ಹೊರಗೆ ಹೋಗಿ ಜೊತೆಗೆ ನಿಮ್ಮ ಅಂಗಾಂಶಗಳಿಂದ ದ್ರವದ ಅಂಶವನ್ನೂ ಹೊರಹಾಕುತ್ತದೆ.
ಇದು ಅಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ ಮತ್ತು ಇದು ದೇಹದ ನೀರಿನ ಅಂಶವನ್ನು ಕಡಿಮೆ ಮಾಡಬಹುದು.
ನಿಮ್ಮ ನೀರಡಿಕೆಯನ್ನು ಹೋಗಲಾಡಿಸಲು ನೀವು ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿದಂತೆಲ್ಲಾ ನೀವು ಇನ್ನೂ ಹೆಚ್ಚು ಮೂತ್ರವಿಸರ್ಜನೆ ಮಾಡುತ್ತೀರಿ.
ನೀವು ಅತಿಯಾಗಿ ಬಳಲಿದಂತೆ ಅನ್ನಿಸಬಹುದು. ಇದಕ್ಕೆ ಹಲವಾರು ಕಾರಣಗಳಿವೆ.
ಇದು ಅತಿಯಾದ ಮೂತ್ರವಿಸರ್ಜನೆಯಿಂದ ಆಗುವ ನಿರ್ಜಲೀಕರಣ ಮತ್ತು ನಿಮ್ಮ ದೇಹವು ಸಕ್ಕರೆ ಮತ್ತು ಶಕ್ತಿಯ ಅವಶ್ಯಕತೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣ ಆಗಿರಬಹುದು.
ದೀರ್ಘಕಾಲದ ಅಧಿಕ ರಕ್ತದ ಸಕ್ಕರೆಯ ಮಟ್ಟವು ನರಗಳ ಮೇಲೆ ಪರಿಣಾಮ ಬೀರಿ ರಕ್ತದ ಪರಿಚಲನೆಯನ್ನು ಕುಂಠಿತಗೊಳಿಸಬಹುದು, ಇದರಿಂದಾಗಿ ಹುಣ್ಣು ಮತ್ತು ಗಾಯಗಳ ಚರ್ಮವನ್ನು ದುರಸ್ತಿಗೊಳಿಸಲು ರಕ್ತವು ಅಲ್ಲಿಗೆ ತಲುಪಲು ಕಷ್ಟವಾಗಬಹುದು.
ಇದರಿಂದಾಗಿ ಅಂತಹ ಜಾಗಗಳು ತೆರವಾಗಿದ್ದು ತಿಂಗಳುಗಟ್ಟಲೆ ಗುಣವಾಗದೇ ಇರಬಹುದು, ಇದು ಈ ಕೆಳಗಿನ ಅಪಾಯಗಳನ್ನು ಉಂಟುಮಾಡಬಹುದು:
ಮಧುಮೇಹದ ಲಕ್ಷಣಗಳು ಕೆಲವೊಮ್ಮೆ ನಿಮ್ಮ ದೃಷ್ಟಿಯನ್ನು ಕೂಡಾ ಒಳಗೊಳ್ಳಬಹುದು.
ರಕ್ತದಲ್ಲಿರುವ ಅಧಿಕ ಸಕ್ಕರೆಯ ಅಂಶವು ನಿಮ್ಮ ಕಣ್ಣುಗಳಲ್ಲಿರುವ ಮಸೂರಗಳನ್ನೂ ಒಳಗೊಂಡು ನಿಮ್ಮ ಅಂಗಾಂಶಗಳಿಂದ ದ್ರವವನ್ನು ಸೆಳೆಯಬಹುದು.
ಇದು ನಿಮ್ಮ ದೃಷ್ಟಿ ಕೇಂದ್ರೀಕರಿಸುವುದರ ಮೇಲೆ ಪರಿಣಾಮ ಬೀರುತ್ತದೆ.
ರಕ್ತದಲ್ಲಿ ಅಧಿಕ ಸಕ್ಕರೆಯ ಅಂಶವಿದ್ದರೆ ಅದು ನರಮಂಡಲಕ್ಕೆ ಹಾನಿ ಉಂಟುಮಾಡಬಹುದು.
ನಿಮ್ಮ ಕೈಗಳು ಮತ್ತು ಪಾದಗಳಲ್ಲಿ ಜುಮ್ಮೆನ್ನಿಸುವಿಕೆ, ಸಂವೇದನೆಯ ನಷ್ಟ, ಹಾಗೂ ನಿಮ್ಮ ಕೈಗಳು, ತೋಳುಗಳು ಕಾಲುಗಳು ಮತ್ತು ಪಾದಗಳಲ್ಲಿ ಸುಟ್ಟಂತಹ ಅನುಭವ ನಿಮ್ಮ ಗಮನಕ್ಕೆ ಬರಬಹುದು.
ಶೇಕಡ 75 ರಷ್ಟು ಸ್ತ್ರೀಯರು ತಮ್ಮ ಜೀವಮಾನದಲ್ಲಿ ಕನಿಷ್ಠ ಒಂದು ವಿಧದ ಯೋನಿ ಸೋಂಕನ್ನು ಹೊಂದಿರುತ್ತಾರೆ.
•ಅಧಿಕ ರಕದ ಸಕ್ಕರೆ ಮತ್ತು ಯೋನಿ ಸೋಂಕುಗಳ ನಡುವೆ ಒಂದು ಪ್ರಮುಖ ಸಂಬಂಧವಿದೆ.
ಮಧುಮೇಹವನ್ನೂ ಒಳಗೊಂಡು ಹಲವಾರು ಅಂಶಗಳು ನಿಮ್ಮ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು.
ಮಧುಮೇಹ ಹೊಂದಿರುವ 35 % ದಿಂದ 75% ಪುರುಷರು ನಿಮಿರುವಿಕೆಯ ಸಮಸ್ಯೆಗಳು ಅಥವಾ ನಪುಂಸಕತೆಯ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ.
ನಿಯಂತ್ರಣ ಮಾಡದ ಮಧುಮೇಹವು ಹೃದಯ ರೋಗ, ನರಗಳ ಹಾನಿ, ಅಂಗಚ್ಛೇದನೆಗಳು ಮತ್ತು ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನೂ ಒಳಗೊಂಡು ಹಲವಾರು ಅಲ್ಪಾವಧಿ ಮತ್ತು ದೀರ್ಘಾವಧಿಯ ಆರೋಗ್ಯದ ತೊಡಕುಗಳಿಗೆ ಕಾರಣವಾಗಬಹುದು.
ಸಹಜ ವ್ಯಕ್ತಿಗೆ ಹೋಲಿಸಿದರೆ ಮಧುಮೇಹವು ಹೃದಯ ಸಂಬಂಧಿ ರೋಗ ಅಥವಾ ಆಘಾತವನ್ನು ೩ ರಿಂದ ೪ ಪಟ್ಟು ಹೆಚ್ಚಿಸುತ್ತದೆ. ಇದು ಎದೆ ನೋವು (ಆಂಜಿನ) ಜೊತೆಗಿನ ಅಪಧಮನಿಯ ರೋಗಗಳು, ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತನಾಳಗಳು ಕಿರಿದಾಗುವುದಕ್ಕೆ ಕಾರಣವಾಗಬಹುದು(ಅಥೆರೋಸ್ಲೆರೋಸಿಸ್).
ಅಧಿಕ ಸಕ್ಕರೆಯ ಅಂಶವು ನಿಮ್ಮ ನರಗಳನ್ನು, ವಿಶೇಷವಾಗಿ ನಿಮ್ಮ ಕಾಲಿನ ನರಗಳನ್ನು ಪೋಷಿಸುವ ಸೂಕ್ಷ್ಮ ರಕ್ತನಾಳಗಳ(ಕ್ಯಾಪಿಲ್ಲರೀಸ್) ಗೋಡೆಗಳನ್ನು ಘಾಸಿಗೊಳಿಸಬಹುದು. ಇದು ಜುಮ್ಮೆನ್ನಿಸುವುದು, ಜೋವು ಹಿಡಿಯುವಿಕೆ, ಮತ್ತು ಸುಟ್ಟಂತಹ ಅನುಭವ ಅಥವಾ ನೋವನ್ನು ಉಂಟುಮಾಡಬಹುದು, ಇದು ಕಾಲಬೆರಳುಗಳ ಅಥವಾ ಕೈಬೆರಳುಗಳ ತುದಿಯಿಂದ ಪ್ರಾರಂಭವಾಗಿ ಕ್ರಮೇಣ ಮೇಲಕ್ಕೆ ಹರಡಬಹುದು.
ಇದಕ್ಕೆ ಚಿಕಿತ್ಸೆ ಮಾಡದೇ ಇದ್ದಲ್ಲಿ, ಅಂತಹ ಅಂಗಗಳಲ್ಲಿ ನರಗಳ ಎಲ್ಲಾ ಸಂವೇದನೆಯನ್ನು ನೀವು ಕಳೆದುಕೊಳ್ಳಬಹುದು. ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ನರಗಳಿಗೆ ಹಾನಿ ಉಂಟಾದಲ್ಲಿ ಅದು ವಾಕರಿಗೆ, ವಾಂತಿಬೇಧಿ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅದು ಪುರುಷರಲ್ಲಿ ಶಿಶ್ನದ ನಿಮಿರುವಿಕೆಯ ಸಮಸ್ಯೆಯನ್ನು ಉಂಟುಮಾಡಬಹುದು.
ಮೂತ್ರಪಿಂಡಗಳು ನಿಮ್ಮ ರಕ್ತದಿಂದ ತ್ಯಾಜ್ಯವನ್ನು ಸೋಸುವಂತಹ ರಕ್ತನಾಳಗಳ ಗುಂಪುಗಳನ್ನು (ಗ್ಲೋಮೆರುಲಿ) ಮಿಲಿಯಗಟ್ಟಲೆ ಸಂಖ್ಯೆಯಲ್ಲಿ ಹೊಂದಿರುತ್ತವೆ. ಮಧುಮೇಹ ಈ ನಾಜೂಕಾದ ಸೋಸುವ ವ್ಯವಸ್ಥೆಗೆ
ಹಾನಿಯುಂಟುಮಾಡಬಹುದು. ತೀವ್ರವಾದ ಹಾನಿಯು ಮೂತ್ರಪಿಂಡಗಳ ವೈಫಲ್ಯ ಅಥವಾ ಸರಿಪಡಿಸಲಾಗದಂತಹ ಅಂತಿಮ ಹಂತದ ಮೂತ್ರಪಿಂಡದ ರೋಗಕ್ಕೆ ಕಾರಣವಾಗಿ ಅದು ಡಯಾಲಿಸಿಸ್ ಅಥವಾ ಮೂತ್ರಪಿಂಡದ ಕಸಿ ಮಾಡಲು ಕಾರಣವಾಗಬಹುದು.
ಮಧುಮೇಹವು ಅಕ್ಷಿಪಟಲದ ರಕ್ತನಾಳಗಳಿಗೆ ಹಾನಿಯುಂಟುಮಾಡಿ (ಡಯಬೆಟಿಕ್ ರೆಟಿನೋಪತಿ) ಸಂಭಾವ್ಯ ಕುರುಡುತನಕ್ಕೂ ಕಾರಣವಾಗಬಹುದು. ಅದು ಕ್ಯಾಟರಾಕ್ಟ್ ಮತ್ತು ಗ್ಲೈಕೋಮಾದಂತಹ ಗಂಭೀರವಾದ ದೃಷ್ಟಿ ಸಮಸ್ಯೆಗಳಿಗೆ ಕೂಡಾ ಕಾರಣವಾಗಬಹುದು.
ಪಾದದಲ್ಲಿನ ನರಮಂಡಲಕ್ಕೆ ಹಾನಿ ಅಥವಾ ರಕ್ತ ಪರಿಚಲನೆ ಸರಾಗವಾಗಿಲ್ಲದಿರುವುದು ಪಾದಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದನ್ನು ಚಿಕಿತ್ಸೆ ಮಾಡದೇ ಹೋದಲ್ಲಿ ಗಾಯಗಳು ಅಥವಾ ಹುಣ್ಣುಗಳು ಗಂಭೀರ ಸೋಂಕನ್ನು ಹೊಂದಿ ಕೆಲವೊಮ್ಮೆ ಅದು ಸರಿಯಾಗಿ ವಾಸಿಯಾಗದೇ ಇರಬಹುದು. ಅಂತಿಮವಾಗಿ ಈ ಸಮಸ್ಯೆಗಳ ನಿವಾರಣೆಗೆ ಸೋಂಕು ತಗುಲಿದ ಅಂಗವನ್ನು ಕತ್ತರಿಸಬೇಕಾಗಬಹುದು. ಅಂಗಚ್ಛೇಧನಕ್ಕೆ ಮಧುಮೇಹವು ಬಹಳ ಸಾಮಾನ್ಯವಾದ ಕಾರಣವಾಗಿದೆ.
ಮಧುಮೇಹವು ನಿಮ್ಮನ್ನು ಬ್ಯಾಕ್ಟೀರಿಯ ಮತ್ತು ಶಿಲೀಂಧ್ರದ ಸೋಂಕುಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಒಡ್ಡಬಹುದು.
ಮಧುಮೇಹದ ಮಾತ್ರೆಗಳು ರಕ್ತದ ಸಕ್ಕರೆ ಅಂಶವನ್ನು ಮತ್ತು ಮುಂದಿನ ಸಮ್ಸ್ಯೆಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ.
ಮಧುಮೇಹಕ್ಕೆ ವಿವಿಧ ಬಗೆಯ ಮಾತ್ರೆಗಳು ಅಥವಾ ಟ್ಯಾಬ್ಲೆಟ್ಗಳು ಲಭ್ಯವಿವೆ. ಅವುಗಳಲ್ಲಿ ಹೆಚ್ಚಿನವು ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ.
ಕೆಲವರು ಒಂದಕ್ಕಿಂತ ಹೆಚ್ಚು ಮಾತ್ರೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ನಿಮ್ಮ ಆಹಾರ ಪದ್ಧತಿ ಮತ್ತು ದೈನಂದಿನ ವ್ಯಾಯಾಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದಲ್ಲಿ ಮಧುಮೇಹದ ಮಾತ್ರೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ.
ನೀವು ಇದನ್ನು ಮಾಡಲೇಬೇಕು:
ನೀವು ಇದನ್ನು ಮಾಡಲೇಬಾರದು:
ಕೆಲವೊಮ್ಮೆ ಒಬ್ಬರ ವೈಯಕ್ತಿಕ ಸ್ಥಿತಿಯನ್ನು ಪರಿಗಣಿಸಿ, ಅವರ ಮಧುಮೇಹದ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಅಥವಾ ತಡೆಯಲು ಅವರಿಗೆ ಇತರ ಹಲವು ಔಷಧಿಗಳು ಬೇಕಾಗಬಹುದು:
ಇದು ನಿಮ್ಮ ದೇಹದ ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹವು ಗ್ಲೂಕೋಸನ್ನು ಬಳಸಿಕೊಳ್ಳುವಲ್ಲಿ ನೆರವಾಗುತ್ತದೆ.
ನಿಮ್ಮ ತೂಕವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ನೆರವಾಗಬಹುದು.
ಆರಂಭದಲ್ಲಿ, ಇದು ಹೊಟ್ಟೆಯ ತಳಮಳ ಮತ್ತು ಭೇಧಿಗೆ ಕಾರಣವಾಗಬಹುದು ಆದರೆ ಸಾಮಾನ್ಯವಾಗಿ ೧ ವಾರದ ನಂತರ ಸರಿಹೋಗುತ್ತದೆ, ಆಹಾರದೊಂದಿಗೆ ಸೇವಿಸುವುದು ನೆರವಾಗಬಹುದು.
ಕೆಲವೊಮ್ಮೆ ಇದರ ಖಾಲಿ ಕವಚವನ್ನು ನೀವು ಪಾಯಿಖಾನೆಯಲ್ಲಿ ಕಾಣಬಹುದು.
ಇದು ನಿಮ್ಮ ಗ್ಲೂಕೋಸಿನ ಪ್ರಮಾಣವನ್ನು ಅವಲಂಬಿಸಿ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ನಿನ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ.
ರಕ್ತದಲ್ಲಿ ಗ್ಲೂಕೋಸಿನ ಕೊರತೆಯನ್ನು(ಹೈಪೋಗ್ಲಿಸೀಮಿಯ) ಉಂಟು ಮಾಡುವುದಿಲ್ಲ ಮತ್ತು ಇದು ಅತ್ಯಂತ ಸುರಕ್ಷಿತವಾದ ಔಷಧಿಯಾಗಿದೆ.
ಬಾಯಿ ಮೂಲಕ ಸೇವಿಸುವ ಈ ಔಷಧಿಗಳು(ಸಲ್ಫೋನಿಲ್ಯೂರಿಯಗಳು) ಹೆಚ್ಚು ಇನ್ಸುಲಿನ್ ಸ್ರವಿಸುವಂತೆ ಮೇದೋಜ್ಜೀರಕ ಗ್ರಂಥಿಯನ್ನು ಪ್ರಚೋದಿಸುತ್ತವೆ.
ಕೆಲವೊಮ್ಮೆ ಇದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ಅಥವಾ ಹೈಪೋಗ್ಲಿಸೀಮಿಯಾಕ್ಕೆ ಕಾರಣವಾಗಬಹುದು.
ಇವುಗಳನ್ನು ಇನ್ಸುಲಿನ್ ಹಾಗೆ ಚರ್ಮದ ಅಡಿಯಿಂದ ತೆಗೆದುಕೊಳ್ಳಬಹುದು ಮತ್ತು ಇವುಗಳು ಗ್ಲೂಕೋಸಿನ ಪ್ರಮಾಣವನ್ನು ಅವಲಂಬಿಸಿ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನಿನ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ.
ಇದು ದೇಹತ ತೂಕವನ್ನು ಇಳಿಸಲು ನೆರವಾಗುತ್ತದೆ.
ಇದು ಹೈಪೋಗ್ಲಿಸೀಮಿಯಾವನ್ನು ಉಂಟುಮಾಡುವುದಿಲ್ಲ ಆದರೆ ಕೆಲವೊಮ್ಮೆ ನಿಮಗೆ ವಾಕರಿಕೆಯ ಅನುಭವ ಉಂಟಾಗಬಹುದು
•ಇದು ನಿಮ್ಮ ದೇಹದಲ್ಲಿ, ವಿಶೇಷವಾಗಿ ನಿಮ್ಮ ಸ್ನಾಯುಗಳಲ್ಲಿ ಗ್ಲೂಕೋಸನ್ನು ಪಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
•ಕೆಲವೊಮ್ಮೆ ಇದು ನಿಮ್ಮ ತೂಕ ಹೆಚ್ಚಾಗಲು ಅಥವಾ ಊತಕ್ಕೆ ಕಾರಣವಾಗಬಹುದು
ಇವುಗಳು ಸ್ವಲ್ಪ ಸಮಯದವರೆಗೆ ಕ್ರಿಯಾಶೀಲವಾಗಿರುವ ಔಷಧಿಗಳು ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಅನ್ನು ಸ್ರವಿಸಲು ನೆರವಾಗುತ್ತವೆ.
ಈ ಔಷಧಿಗಳನ್ನು ಊಟದ ಜೊತೆಗೇ ಮಾತ್ರವೇ ತೆಗೆದುಕೊಳ್ಳಬೇಕು.
ಈ ಔಷಧಿಗಳನ್ನು ಊಟದ ಜೊತೆಗೇ ಮಾತ್ರವೇ ತೆಗೆದುಕೊಳ್ಳಬೇಕು.
ಆ ಮಾತ್ರೆಗಳು ನೀವು ಆಹಾರ ಸೇವಿಸಿದ ನಂತರ ಕರುಳಿನಿಂದ ಕಾರ್ಬೋಹೈಡ್ರೇಟ್ಗಳ ಹೀರುವಿಕೆಯನ್ನು ನಿಧಾನಗೊಳಿಸುತ್ತವೆ
ಆಹಾರದ ಮೇಲೆ ನೇರವಾಗಿ ವರ್ತಿಸುವ ಕಾರಣ, ಇವುಗಳನ್ನು ಊಟದೊಂದಿಗೆ ತೆಗೆದುಕೊಳ್ಳಬೇಕು. ನೀವು ಒಂದು ಊಟವನ್ನು ತಪ್ಪಿಸುವುದಾದರೆ ಇದನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಆರಂಭದಲ್ಲಿ, ಇದು ಜಠರದಲ್ಲಿ ಕಸಿವಿಸಿ(ಗ್ಯಾಸ್ಟ್ರಿಕ್) ಉಂಟುಮಾಡಬಹುದು, ಅದರೆ ಇದು ಕ್ರಮೇಣವಾಗಿ ಕಣ್ಮರೆಯಾಗುತ್ತದೆ.
ಇವುಗಳು ಗ್ಲೂಕೋಸನ್ನು ಮೂತ್ರದ ಮೂಲಕ ದೇಹದಿಂದ ಹೊರಹಾಕಲು ಮೂತ್ರಪಿಂಡಗಳ ಮೇಲೆ ಕಾರ್ಯವೆಸಗುತ್ತವೆ
ಜನರಿಗೆ ಸ್ವಲ್ಪ ತೂಕವನ್ನು ಇಳಿಸಿಕೊಳ್ಳಲು ನೆರವಾಗಬಹುದು
ಕೆಲವೊಮ್ಮೆ ಇದು ಜನನಾಂಗಗಳಲ್ಲಿ ಶಿಲೀಂಧ್ರದ ಸೋಂಕನ್ನು ಉಂಟು ಮಾಡಬಹುದು
ಹೈಪೋಗ್ಲಿಸೀಮಿಯ ಅಂದರೆ ರಕ್ತದಲ್ಲಿ ಗ್ಲೂಕೋಸಿನ ಅಂಶವು ಅತೀ ಕಡಿಮೆ, ಅಂದರೆ ಸಾಮಾನ್ಯವಾಗಿ ೭೦ ಮಿಲಿಗ್ರಾಂ/ಡಿಎಲ್ ಗಿಂತಲೂ ಕಡಿಮೆಯಿರುವ ಒಂದು ಸ್ಥಿತಿಯಾಗಿದೆ.
ಇದು ನೀವು:
ಆದಾಗ್ಯೂ, ನಿಮ್ಮ ಆರೋಗ್ಯದ ಆರೈಕೆ ಮಾಡುವವರೊಂದಿಗೆ ವೈಯಕ್ತಿಕವಾಗಿ, ನಿಮ್ಮ ರಕ್ತದ ಗ್ಲೂಕೋಸಿನ ಪ್ರಮಾಣ ಮತ್ತು ನಿಮಗೆ ಅತೀ ಕಡಿಮೆ ಪ್ರಮಾಣ ಎಂದರೆ ಯಾವುದು ಎಂಬುದರ ಕುರಿತು ಮಾತನಾಡುವುದು ಅಗತ್ಯ.
ನಿಮ್ಮ ರಕ್ತದಲ್ಲಿ ಸಕ್ಕರೆಯ ಅಂಶವು ಕಡಿಮೆ ಇದ್ದಾಗ ಮೊದಲಿಗೆ, ತ್ವರಿತವಾಗಿ-ಕೆಲಸ ಮಾಡುವ ಒಂದು ಕಾರ್ಬೋಹೈಡ್ರೇಟ್ ಅನ್ನು 15 ಗ್ರಾಂಗಳಷ್ಟು ತಿನ್ನಿ ಅಥವಾ ಕುಡಿಯಿರಿ. ಅವುಗಳೆಂದರೆ:
ನಿಮಗೆ ರಕ್ತದಲ್ಲಿ ಕಡಿಮೆ ಸಕ್ಕರೆ ಇರುವ ಸಮಸ್ಯೆಯಿದ್ದರೆ, ತಕ್ಷಣವೇ 15 ಗ್ರಾಂಗಳಷ್ಟು ತ್ವರಿತವಾಗಿ ಕೆಲಸ ಮಾಡುವ, ಈ ಕೆಳಗೆ ತಿಳಿಸಿದಂತಹ ಸಕ್ಕರೆಯುಕ್ತ ಆಹಾರವನ್ನು ತಿನ್ನುವುದು ಅಥವಾ ಕುಡಿಯುವುದು ಅತೀ ಅಗತ್ಯ:
ಮಧುಮೇಹಕ್ಕೆ ಇನ್ಸುಲಿನ್ನಿಂದ ಚಿಕಿತ್ಸೆ ಪಡೆಯುವವರಲ್ಲಿ ರಾತ್ರಿಯ ಹೈಪೋಗ್ಲಿಸೀಮಿಯ ಅಥವಾ ರಾತ್ರಿಯ ಹೈಪೋ ಸಾಮಾನ್ಯವಾಗಿದೆ. ಇದರ ಲಕ್ಷಣಗಳು ಹೈಪೋದಿಂದ ಎಚ್ಚರವಾದ ಮೇಲೆ ಮಾತ್ರವೇ ಅರಿವಿಗೆ ಬರುತ್ತದೆ.
ಅದರ ಸ್ವರೂಪದಿಂದಾಗಿ, ಸಾಮಾನ್ಯವಾಗಿ, ನಿಮಗೆ ರಾತ್ರಿಯ ಹೈಪೋ ಇದೆಯೆಂದು ಹೈಪೋವಿನ ಕಾರಣ ಎಚ್ಚರಗೊಂಡ ಮೇಲೆ ಮಾತ್ರವೇ ಗೊತ್ತಾಗುತ್ತದೆ.
ಆದ್ದರಿಂದ, ತಮಗೆ ರಾತ್ರಿಯ ಸಮಯದ ಹೈಪೋ ಇದೆಯೆಂದು ಜನರಿಗೆ ಅರಿವೇ ಇರುವುದಿಲ್ಲ, ಆದ್ದರಿಂದ, ಬರಬಹುದಾದ ರಾತ್ರಿಯ ಹೈಪೋವಿನ ಚಿಹ್ನೆಗಳು ಮತ್ತು ರೋಗ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುವುದು ಒಳ್ಳೆಯದು.
ಇನ್ಸುಲಿನ್ ಬಳಕೆ ಮಾಡುವವರಲ್ಲಿ ರಾತ್ರಿಯ ಹೈಪೋಗ್ಲಿಸೀಮಿಯ ಬಹಳ ಸಾಮಾನ್ಯವಾಗಿ ಕಂಡು ಬರುವುದಾದರೂ, ಅದು ಮಧುಮೇಹಕ್ಕೆ ಬಾಯಿ ಮೂಲಕ ಔಷಧಿ ತೆಗೆದುಕೊಳ್ಳುವವರಲ್ಲಿ ಕೂಡಾ ಕಂಡು ಬರಬಹುದು.
ರಾತ್ರಿಯ ಹೈಪೋಗ್ಲಿಸೀಮಿಯದ ಸಮಯದಲ್ಲಿ ಕೆಲವೊಮ್ಮೆ ನೀವು ಎಚ್ಚರಗೊಳ್ಳಬಹುದು.
ಆದಾಗ್ಯೂ, ಒಂದು ವೇಳೆ ನೀವು ಎಚ್ಚರಗೊಳ್ಳದಿದ್ದಲ್ಲಿ, ನೀವು ನಿದ್ದೆಯಲ್ಲಿದ್ದಾಗ ನಿಮಗೆ ಹೈಪೋಗ್ಲಿಸೀಮಿಯ ಸಂಭವಿಸಿರಬಹುದೆಂಬುದಕ್ಕೆ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಸುಳಿವುಗಳನ್ನು ನೀವು ಗಮನಿಸಬಹುದು.
ಮಧುಮೇಹವಿರುವ ಮಕ್ಕಳ ಪೋಷಕರಿಗೆ, ರಾತ್ರಿಯ ಹೈಪೋಗ್ಲಿಸೀಮಿಯ ನಿಜವಾಗಿಯೂ ಒಂದು ಚಿಂತೆಯ ವಿಷಯವಾಗಿದೆ.
ಮಧುಮೇಹವಿರುವ ಮಕ್ಕಳ ಪೋಷಕರು, ಅವರಿಗೆ ರಾತ್ರಿಯ ಹೈಪೋಗ್ಲಿಸೀಮಿಯ ಸಂಭವಿಸುತ್ತಿರಬಹುದೆಂದು ಚಿಂತಿತರಾಗಿದ್ದಲ್ಲಿ ಮಕ್ಕಳು ಮಲಗಿದ್ದಾಗ ಅವರ ಕುತ್ತಿಗೆಯನ್ನು ಪರೀಕ್ಷಿಸಲು ಬಯಸಬಹುದು.